Advt. 
 Views   436
Oct 16 2023 11:05PM

ಈಗಲೂ ನೆನಪಾಗಿ ಕಾಡೋದು ರೆನಾಲ್ಡ್ಸ್ ಪೆನ್ನು


ವಿದ್ಯಾರ್ಥಿ ಜೀವನ ಅಂದ್ರೆ ಶಾಲೆ, ಶಿಕ್ಷಕರು ಮತ್ತು ಅವರಿಂದ ತಿಂದ ಪೆಟ್ಟು, ಗೆಳೆಯರು ಅವರೊಂದಿಗಿನ ಆಟ - ಜಗಳ...

ಯಾರೋ ಭೇಟಿಯಾದ ವ್ಯಕ್ತಿ ,  ಯಾವತ್ತೊ ನೋಡಿದ  ಊರು, ಸ್ಥಳದಂತೆ 25-30 ವರ್ಷಗಳ ಹಿಂದೆ ಬರೆಯುತ್ತಿದ್ದ ಪೆನ್ನು ನೆನಪಲ್ಲಿದ್ದು ಆಗಾಗ ನೆನಪಾಗಿ ಕಾಡುತ್ತದೆಯಾ ? ಮೊದಲ ಸಲ ಇಷ್ಟವಾದ ಹುಡುಗಿಯಂತೆ....

ಹಾಗೆ ಈಗಲೂ ನೆನಪಾಗಿ ಇರೋದು ಈ ರೆನಾಲ್ಡ್ಸ್ ಪೆನ್ನು. 

30 ವರ್ಷದ ಹಿಂದೆ ಶಾಲೆ ಅಂದ್ರೆ ಪಾಟಿ ಪೆಣೆ. ಕ್ಲಾಸ್ ನಲ್ಲಿ ಶಿಕ್ಷಕರು ಬೋರ್ಡ್ ನಲ್ಲಿ ಬರೆದದ್ದು ಅಥವಾ ಬಾಯಿಂದ ಹೇಳಿದ್ದನ್ನು ಪಾಟಿಯಲ್ಲಿ ಬರೆದು ತೋರಿಸಿದರೆ ಮುಗಿತು...ಒಂದು ಎರಡನೆ ಕ್ಲಾಸ್ ಹೀಗೆ ಇತ್ತು ನಮಗೆ !

ಮೂರು ಮತ್ತು ನಾಲ್ಕನೆ ತರಗತಿಗೆ ಬಂದಾಗ ನಾಲ್ಕು ಪಠ್ಯಪುಸ್ತಕ ಮತ್ತು ಒಂದ್ ನೋಟ್ ಬುಕ್ ನಮ್ಮ ಸಂಗಾತಿ. ನೋಟ್ ಬುಕ್ ನಲ್ಲಿ ಒಂದು ಪೇಜ್ ಮಡಚಿದರೆ ಅದು ಒಂದು ವಿಷಯದ ಪ್ರಶ್ನೆ ಉತ್ತರ ಬರೆಯುವ ವಿಭಾಗ ! 

ಐದನೇ ತರಗತಿಗೆ MHPS ( ಕೊಪ್ಪಳ ) ಶಾಲೆಗೆ ಹೋದಾಗ ಅಲ್ಲಿ ಜೊತೆಯಾದದ್ದು ಇಂಗ್ಲೀಷ್ ABCD ಮತ್ತು ಪೆನ್ನು,   ಐದು ಪಠ್ಯ ಪುಸ್ತಕ ಮತ್ತು ಅವಕ್ಕೆ ರಫ್ ಮತ್ತು ಫೇರ್ ನೋಟ್ ಬುಕ್ ಅಂತ 12 ಕಾಪಿಗಳು ( ನೋಟ್ ಬುಕ್ ) 

ಸರದಾರ ಗಲ್ಲಿ ಶಾಲೆಯಲ್ಲಿ ಮೂರು-ನಾಲ್ಕನೆ ಕ್ಲಾಸಿನ ಪ್ರಶ್ನೋತ್ತರ ಬರೆಯೋಕೆ ಮನೆಯೊಳಗಿನ ಪೆನ್ನು ಬಳಸಬೇಕಿತ್ತು ಆದರೆ ಅದು ನನ್ನ ಸ್ವಂತದ್ದಲ್ಲ...

ಐದನೇ ತರಗತಿಗೆ ಸ್ವಂತ ಪೆನ್ನು ಬೇಕಾಯ್ತು.  ಜವಾಹರ ರಸ್ತೆಯ  ದಿವಟರ್ ಸರ್ಕಲ್ ನಲ್ಲಿ ಸ್ವಾಮಿ ಬುಕ್ ಡೀಪೋ ಅಂತ ಅಂಗಡಿ. ಇಡೀ ಊರಿನ ವಿದ್ಯಾರ್ಥಿಗಳಿಗೆ ಅಲ್ಲಿಯೇ ಬುಕ್ , ನೋಟ್ ಬುಕ್ , ಪೆನ್ನು , ಪೆನ್ಸಿಲ್, ಶಾಲೆಗೆ ಚಾಕ್ ಪೀಸ್ ಡಸ್ಟರ್ ಸಿಗುತ್ತಿದ್ದದ್ದು.

ಅದೇ ಅಂಗಡಿಯಲ್ಲಿ ಖರೀದಿಸಿದ್ದು 12 ಲೇಖಕ್ ಕಾಪಿ ಮತ್ತು ಕೆಂಪು ಮತ್ತು ನೀಲಿ ಮಸಿಯ ಎರಡು ರೆನಾಲ್ಡ್ಸ್ ಪೆನ್ನು.  ಒಂದು ರೆನಾಲ್ಡ್ಸ್ ಪೆನ್ನಿನ ಬೆಲೆ ಆಗ ಎರಡೂವರೆ ರೂಪಾಯಿ. ಆಗಿನ ಕಾಲಕ್ಕೆ ಬಲು ದುಬಾರಿ ಅದು...

5 ರಿಂದ 10 ನೇ ತರಗತಿವರೆಗೆ ನಾವೆಲ್ಲ ಬಳಸಿದ್ದು ಇದೇ ರೆನಾಲ್ಡ್ಸ್ ಪೆನ್ . 

ನಂತರದಲ್ಲಿ ಪೆನ್ನು ಬದುಕಿನ ಅವಿಭಾಜ್ಯ ಅಂಗವಾದರೂ ಬೇರೆ ಬೇರೆ ಕಂಪನಿಯ,  ಬೇರೆ ಮಾಡೆಲ್ ಪೆನ್ ಗಳು ಬಂದವು , ದುಬಾರಿ ಪೆನ್ನು ಬಳಸಿದರೂ , ಅತಿ ದುಬಾರಿ ಪೆನ್ನು ಗಿಫ್ಟ್ ಅಂತ ಬಂದಾಗಲೂ ಅವುಗಳಿಗಿಂತ ಈಗಲೂ ನೆನಪಲ್ಲಿ ಇರೋದು ರೆನಾಲ್ಡ್ಸ್ ಪೆನ್ನು. ಏಕೆಂದರೆ ಅದು ಮೊದಮೊದಲ್ ನಮಗಾಗಿಯೇ  ಖರೀದಿಸಿದ ಸ್ವಂತ ಪೆನ್ನು...

- ಹೆಚ್.ಪಿ 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize