ಒಲವಿನ ನೆಲವು
ಗುಬ್ಬಚ್ಚಿಗೆ ಕಟೊಂದು ನೆಲವು
ಬರುತ್ತವೆ ಆಗ ಗುಬ್ಬಚ್ಚಿಗಳು ಹಾರಿ
ನೆಲುವಲಿ ಹಾಕು ದಾಹ ನೀಗಿಸೋ ನೀರು
ಗುಬ್ಬಚ್ಚಿ ಬಂದು ನೀರು ಕುಡಿಯೇ
ಚಿಂವ್ ಚಿಂವ್ ಎನ್ನುತ್ತಾ ಬಳಗವ ಕರೆಯೇ
ಪ್ರೀತಿಯ ಗುಬ್ಬಚ್ಚಿಯೇ...
ನೆಲುವಿನಲ್ಲಿ ಕಾಳುಯಿದೆ
ಹಾರಿ ಬಂದು ನೀ ತಿನ್ನು ಬಾ
ನಿನ್ನ ಮೇಲೆ ಒಲವುಯಿದೆ
ಏಕೆ ನಿನಗೆ ಈ ಭಯವೂ...
ಕಾಳು ತಿಂದು ನೀರು ಕುಡಿದು
ಹಾರಾಡೋ ಗುಬ್ಬಚ್ಚಿಯೇ...
ಈ ನಿನ್ನ ಧ್ವನಿಯಿಂದ
ಚಿಂವ್ ಚಿಂವ್ ರಾಗ ಬರಲಿ
ಒಲವಿನ ನೆಲವು ನಿನಗಾಗಿಯೇ
ಮುದ್ದು ಗುಬ್ಬಚ್ಚಿಯೇ..
ಕಾಣುವಂತ ಈ ನೆಲವು
ದೂರದಿಂದ ನಿನ್ನ ಕರೆಯುತ್ತಿದೆ
ಮುದ್ದು ಗುಬ್ಬಚ್ಚಿಯೇ ನೀ
ಬಂದಾಗ ಖುಷಿಯಾಗಿದೆ
ಸುಡುವ ಬಿಸಿಲಲ್ಲಿ ಈ ನೆಲುವು ನಿನಗಾಸರೆ
ರಣರಣ ಬಿಸಿಲಲ್ಲಿ ದಾಹ ನೀಗಿಸೋ
ಈ ನೆಲುವು ನಿನಗೆ ಇಷ್ಟವೇ..
ಒಲವಿನ ಈ ನೆಲವು ನಿನಗೆ
ಪ್ರೀತಿಯ ಗುಬ್ಬಚ್ಚಿಯೇ...
✍️ ರಾಜೇಸಾಬ ಕೆ.ರಾಟಿ
( ಮಾರ್ಚ್ 20 ವಿಶ್ವ ಗುಬ್ಬಚ್ಚಿ ದಿನ )