Advt. 
 Views   327
Apr 17 2024 12:43PM

ರಾಜಕೀಯ ಆಕರ್ಷಣೀಯ ಅಷ್ಟೇ ಅನಿಶ್ಚಿತ !


ಕೊಪ್ಪಳದ ರಾಜಕಾರಣ ಮೂವತ್ತು ವರ್ಷದಲ್ಲಿ ಮೊದಲ ಬಾರಿಗೆ ಬದಲಾವಣೆ ಕಂಡಿದೆ. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರಾಜಕೀಯ ಮಾಡುತ್ತಲೆ ಬಂದ ಸಂಗಣ್ಣ ಕರಡಿ ಈಗ ಕಾಂಗ್ರೆಸ್ ಸೇರಿದ್ದಾರೆ. ಅಂದ ಹಾಗೆ 1994 ರಿಂದ ಕರಡಿ ಕುಟುಂಬ ಇಲ್ಲದ ಮೊದಲ  ಚುನಾವಣಾ ಕಣ ಈ ಸಲದ್ದು. 

ರಾಜಕೀಯ ರಂಗ ಎಷ್ಟು ಆಕರ್ಷಣಿಯವೊ ಅಷ್ಟೇ ಅನಿಶ್ಚಿತದ್ದು. 2004 ರಲ್ಲಿ ಆಗಿನ ಕಾಂಗ್ರೆಸ್ ಸಿಎಂ ಎಸ್.ಎಂ.ಕೃಷ್ಣ ಇದೇ ಸಂಗಣ್ಣ ಕರಡಿಯವರನ್ನು ಕಾಂಗ್ರೆಸ್ ಸೇರಲು ಆಹ್ವಾನಿಸಿದ್ದರು. ಆದರೆ ಸಂಗಣ್ಣ ಆ ಆಫರ್ ನಿರಾಕರಿಸಿ ಬಿಜೆಪಿ ಸೇರಿದರು. 

ಇದು 2024 . ಇಪ್ಪತ್ತು ವರ್ಷಗಳ ನಂತರ ಬಿಜೆಪಿಯಿಂದ ಕಾಂಗ್ರೆಸ್ ಸೇರಿದರು ಸಂಗಣ್ಣ ಕರಡಿ.

ಬಿಜೆಪಿ ಸೇರಿದ ಸಂಗಣ್ಣ ಕರಡಿ 2004 ರ ಚುನಾವಣೆಯಲ್ಲಿ ಸೋತು ಹೋದರು. ಆವತ್ತು ಕಾಂಗ್ರೆಸ್ ಸೇರಿದ್ದರೆ ಸಂಗಣ್ಣ ಗೆಲ್ಲುತ್ತಿದ್ದರು. ಆವತ್ತು ಸಂಗಣ್ಣ ಕರಡಿ ಕಾಂಗ್ರೆಸ್ ಗೆ ಬಂದಿದ್ದರೆ ಹಿಟ್ನಾಳ ಕುಟುಂಬದ ರಾಜಕೀಯ ಏನಾಗಿರುತ್ತಿತ್ತೊ ಬಲ್ಲವರು ಯಾರು ? 
*      *       *       ‌*   
ಕೆಲ ತಿಂಗಳ ಮುಂಚೆ ಸಿಎಂ ಸಿದ್ದರಾಮಯ್ಯ  ಬಸಾಪುರದ ಏರೊಡ್ರಂ ಗೆ ಬಂದಿದ್ರು. ಆಗ ಭದ್ರತೆ ಕಾರಣಕ್ಕೆ ಕಾರುಗಳು ಒಳಗೆ ಬಿಡದಂತೆ ತಡೆಯಲಾಗುತ್ತಿತ್ತು. ಶಾಸಕ ರಾಘವೇಂದ್ರ ಹಿಟ್ನಾಳ ಕಾರಿನಲ್ಲಿ ಅವರ ತಂದೆ ಬಸವರಾಜ ಹಿಟ್ನಾಳ ಕುಳಿತು ಏರೊಡ್ರಂ ಹತ್ತಿರ ಹೊರಡುವಷ್ಟರಲ್ಲಿ ಸಂಸದ ಸಂಗಣ್ಣ ಕರಡಿ ರಾಘವೇಂದ್ರ ಹಿಟ್ನಾಳ ಕಣ್ಣಿಗೆ ಕಂಡರು. ಅವರನ್ನೂ ತಮ್ಮ ಕಾರಿನಲ್ಲಿ ಹೋಗಲು ಕರೆದಾಗ ಒಪ್ಪಿ ಸಂಗಣ್ಣ ಕರಡಿ ಹಿಟ್ನಾಳ ಕಾರಿನ ಹಿಂದಿನ ಸೀಟಿನಲ್ಲಿ ಕೂಡ್ರಲು ಹೊರಟರು. ಆಗ ಮುಂದಿನ ಸೀಟಿನಲ್ಲಿದ್ದ ಬಸವರಾಜ ಹಿಟ್ನಾಳ ಇಳಿದವರೆ ಸಂಗಣ್ಣ ಕರಡಿ ಕೈಹಿಡಿದು ಕಾರಿನ ಮುಂದಿನ ಸೀಟಿನಲ್ಲಿ ಕೂಡ್ರಿಸಿ ಅವರು ಹಿಂದೆ ಕುಳಿತರು.

ಕೆಲವೇ ತಿಂಗಳಲ್ಲಿ ಅದೇ ಸಂಗಣ್ಣ ಕರಡಿ ಈಗ ಅದೇ ಹಿಟ್ನಾಳ ಇರುವ ಕಾಂಗ್ರೆಸ್ ಗೆ ಬಂದಿದ್ದಾರೆ. ಈಗ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ ಪರ ಬ್ಯಾಟ್ ಬೀಸಲಿದ್ದಾರೆ. ರಾಜಕೀಯ ಅಂದರೆ ಹೀಗೆ ಕ್ರಿಕೆಟ್ ನಂತೆ ಅನಿಶ್ಚಿತ. ಯಾವಾಗ ಏನಾಗುತ್ತೊ ಗೊತ್ತಿಲ್ಲ. 
*       *       *       *
1994 ರಿಂದ 2019 ರವರೆಗೆ ಆರು ಸಲ ವಿಧಾನಸಭೆ, ಎರಡು ಸಲ ಲೋಕಸಭೆ ಗೆ ಒಟ್ಟು ಎಂಟು ಸಲ ಹಿಟ್ನಾಳ ಕುಟುಂಬದ ವಿರುದ್ದ ಚುನಾವಣೆ ಎದುರಿಸಿದ್ದಾರೆ. ಅದರಲ್ಲಿ ಆರು ಬಾರಿ ಗೆದ್ದು ಎರಡು ಸಲ ಸೋಲು ಕಂಡಿದ್ದಾರೆ.

ಹಿಟ್ನಾಳ ಕುಟುಂಬದ ಮೂವರನ್ನೂ ಚುನಾವಣಾ ಕಣದಲ್ಲಿ ಎದುರಿಸಿದ ಸಂಗಣ್ಣ ಕರಡಿ ರಾಘವೇಂದ್ರ ಹಿಟ್ನಾಳ ಎದುರು ( 2013) ಗೆಲುವು ಕಾಣಲಿಲ್ಲ. 

ಉಳಿದಂತೆ ಬಸವರಾಜ ಹಿಟ್ನಾಳ ವಿರುದ್ದ 2004 ರಲ್ಲಿ ಒಮ್ಮೆ ಸೋತು ಅವರ ವಿರುದ್ದ ಲೋಕಸಭೆ ಸೇರಿ ಒಟ್ಟು 5 ಸಲ ಗೆದ್ದಿದ್ದಾರೆ. ರಾಜಶೇಖರ ಹಿಟ್ನಾಳ ವಿರುದ್ದ ಒಮ್ಮೆ ( 2019) ಲೋಕಸಭೆಗೆ ಗೆದ್ದಿದ್ದಾರೆ.
*        *         *         *   
2004 ರಲ್ಲಿ ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿ ಅದಕ್ಕೆ ಉತ್ತಮ ಸ್ಕೋರ್ ತಂದುಕೊಟ್ಟ ಸಂಗಣ್ಣ ಕರಡಿ 2011 ರ ಉಪಚುನಾವಣೆ ಮೂಲಕ ಬಿಜೆಪಿಗೆ ಗೆಲುವು ತಂದು  ಈಗ ಅದೇ ಬಿಜೆಪಿಯಿಂದ ಟಿಕೆಟ್ ತಪ್ಪಿ ಕಾಂಗ್ರೆಸ್ ಗೆ ಬಂದಿದ್ದಾರೆ.

ಇನ್ಮುಂದೆ ಕೊಪ್ಪಳ ಕಾಂಗ್ರೆಸ್ ರಾಜಕೀಯ ಬಹಳ ಇಂಟರೆಸ್ಟಿಂಗ್ ಆಗಿರುತ್ತೆ...



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize