Advt. 
 Views   564
Oct 8 2022 11:25AM

ಭಾವನಾತ್ಮಕ ಕೌಟುಂಬಿಕ ಕಥೆಯ ಹಿಂದಿ ಸಿನಿಮಾ GOODBYE


ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ನಿನಾ ಗುಪ್ತ ಅಭಿನಯದ ಹಿಂದಿ ಸಿನಿಮಾ  ಗುಡ್ ಬೈ ಶುಕ್ರವಾರ ಬಿಡುಗಡೆಯಾಗಿದೆ.

ತಾರಾ ಭಲ್ಲಾ (ರಶ್ಮಿಕಾ ಮಂದಣ್ಣ) ಪಾರ್ಟಿಯಲ್ಲಿ ಇರುವಾಗ ತಂದೆ ಹರೀಶ ಭಲ್ಲಾ ( ಅಮಿತಾಬ್ ಬಚ್ಚನ್) ಮೊಬೈಲ್ ಗೆ ಕರೆ ಮಾಡಿದ್ರೆ ಸ್ವೀಕರಿಸಲ್ಲ. ಮರುದಿನ ತಾರಾ ಕರೆ ಮಾಡುತ್ತಾಳೆ. ಆಗ ಆಕೆಯ ತಂದೆ ಹೇಳೋದು ನಿನ್ನ ತಾಯಿ ಗಾಯಿತ್ರಿ (ನಿನಾ ಗುಪ್ತ) ತೀರಿಹೋದಳು ಅದನ್ನ ಹೇಳೋಕೆ ಕರೆ ಮಾಡಿದ್ದೆ.
ಕಥೆ ಮುಂದೇನು ? ಅದನ್ನು ಸಿನಿಮಾ ನೋಡಿಯೇ ಅರಿಯಬೇಕು.

ಭಾವನಾತ್ಮಕ ಕೌಟುಂಬಿಕ ಕಥೆಯ ಸಿನಿಮಾ ಗುಡ್ ಬೈ ಸಾಂಪ್ರದಾಯಿಕ ನಂಬಿಕೆಗಳ ತಂದೆ ಆಧುನಿಕ ವಿಚಾರಗಳ ಮಗಳ ಪಾತ್ರದಲ್ಲಿ ರಶ್ಮಿಕಾ ಮತ್ತು ಬಿಗ್ ಬಿ ಅಭಿನಯಿಸಿದ್ದಾರೆ.

ಪುಷ್ಪಾ ಸಿನಿಮಾ ನಟನೆಯಿಂದ ದೇಶದ ತುಂಬ ಖ್ಯಾತಿಯಾಗಿರುವ ರಶ್ಮಿಕಾ ನಟಿಸಿದ ಮೊದಲ ಹಿಂದಿ ಸಿನಿಮಾ ಗುಡ್ ಬೈ.

ಬಿಗ್ ಬಿ ಜೊತೆ ನಟಿಸಿದ ರಮ್ಯ ನಂತರ ನಟಿಸಿದ ಕನ್ನಡತಿ ರಶ್ಮಿಕಾ. ಅಮೃತಧಾರೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಬಿಗ್ ಬಿ.  ಈಗ  ಪೂರ್ಣ ಪ್ರಮಾಣದ ಪಾತ್ರದಲ್ಲಿ ಬಿಗ್ ಬಿ ಜೊತೆ ನಟಿಸಿರುವುದೆ ರಶ್ಮಿಕಾ ಹೆಗ್ಗಳಿಕೆ.

ಇಬ್ಬರು ಹಿರಿಯ ಜೀವಗಳು ಮತ್ತು ಅವರಲ್ಲಿ ಒಬ್ಬರು ಇಲ್ಲವಾದ ಮೇಲೆ ಮತ್ತೊಬ್ಬರನ್ನು ಕಾಡುವ ಖಾಲಿತನದ ದೃಶ್ಯಗಳು ಪ್ರೇಕ್ಷಕರನ್ನು ವಿಷಾದಗೊಳಿಸುತ್ತವೆ.

 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize